ಹೊಂಗಿರಣ ಬ್ಲಾಗ್ ಗೆ ತಮಗೆ ಆದರದ ಸುಸ್ವಾಗತ… ನಿಮ್ಮ ಸಲಹೆ ಮಾರ್ಗದರ್ಶನಕ್ಕೆ ಸದಾ ಸ್ವಾಗತ….. ಭೇಟಿ ನೀಡಿದ್ದಕ್ಕೆಧನ್ಯವಾದಗಳು…

ಜಾಣಮೂರ್ಖ

ಆನಂದಮಯ ಈ ಜಗ ಹೃದಯ
ಬಣ್ಣ ಗಾಜಲಿ ನೋಡ
ಲೆಲ್ಲವದೆ ಬಣ್ಣ ಕಾಣ್
ಅಂತೆ ಸತ್ಯಕೆ ಮಿಥ್ಯ
ದಾ ಬಣ್ಣವಯ್ಯೋ !
ಗಾಜಿಗಂಟಿದ ಬಣ್ಣ
ಕಳೆದಾಗಲಲ್ಲೆ ನಿಜ
ವೇದ್ಯವೈ ಸತ್ಯಾರ್ಥ
ಜಾಣಮೂರ್ಖ //
ಬಣ್ಣದ ಗಾಜಿನಲ್ಲಿ  ಭೌತಿಕ ಜಗತ್ತನ್ನು ನೋಡಿದರೆ ಗಾಜು ಯಾವ ಬಣ್ಣದಲ್ಲಿರುತ್ತದೋ ಜಗತ್ತೂ ಅದೇ ಬಣ್ಣದಲ್ಲಿಯೇ ಕಾಣುತ್ತದೆ. ಹಾಗೆಯೇ ಗಾಜಿನ ಬಣ್ಣವನ್ನು ಕಳೆದು ನೋಡಿದರೆ  ಆ ವಸ್ತುವಿನ ನಿಜಸ್ಥಿತಿ ತಿಳಿಯುತ್ತದೆ. ಅಲ್ಲವೇ !? ಹಾಗೆಯೇ ಈ ಬದುಕಿನಲ್ಲಿ ಸತ್ಯಕ್ಕೆ ಮಿಥ್ಯದ ಮುಸುಕಿದೆ ! ಮನಸ್ಸಿಗೆ ಮಾಯೆಯ ಮುಸುಕಿದೆ ! ಅವು  ಗಾಜಿನ ಬಣ್ಣದಂತೆ ಜಗದ ಸತ್ಯದ ನೈಜತೆಯನ್ನು ಅರಿಯಲು ಬಿಡುವುದಿಲ್ಲ. ಅದಕ್ಕೆ ಜ್ಞಾನಿಗಳು, ಪ್ರಾಜ್ಞರು ಗಾಜಿನ ಬಣ್ಣವನ್ನು ಮೊದಲು ಕಳೆದು ಸತ್ಯದ ನೈಜತೆಯನ್ನೇ ನೋಡಿ ಆನಂದಿಸುತ್ತಾರೆ. ಮಿಥ್ಯ ಮತ್ತು ಮಾಯೆಯ ಬಣ್ಣವನ್ನು ಕಳೆದು ನೋಡಿದಾಗ ಬದುಕಿನ ವಾಸ್ತವ ಸತ್ಯವು ಗೋಚರಿಸುತ್ತದೆ. ಆ ನಂತರವೇ ಆನಂದಮಯ ಈ ಜಗ ಹೃದಯ ! ಮತ್ತೆ ಭಯ , ಚಿಂತೆ ದುಃಖ ಉದ್ವೇಗಾದಿಗಳಿಗೆಲ್ಲ ಜಾಗವೆಲ್ಲಿ ? ಅಲ್ಲವೇ ಗೆಳೆಯರೇ ? 

- ಮುರಳೀಧರ ಹೆಚ್.ಆರ್. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ