ಹೊಂಗಿರಣ ಬ್ಲಾಗ್ ಗೆ ತಮಗೆ ಆದರದ ಸುಸ್ವಾಗತ… ನಿಮ್ಮ ಸಲಹೆ ಮಾರ್ಗದರ್ಶನಕ್ಕೆ ಸದಾ ಸ್ವಾಗತ….. ಭೇಟಿ ನೀಡಿದ್ದಕ್ಕೆಧನ್ಯವಾದಗಳು…

ಸೆಪ್ಟೆಂಬರ್ 24, 2020

ಪದ ಚಿಂತನ

ಶಬರಿ/ ಶ್ರಮಣಿ

ಬೇಡರ ಸ್ತ್ರೀ( ರಾಮನ ದರ್ಶನ ನಿರೀಕ್ಷೆಯಲ್ಲಿದ್ದವಳು) ತಪಸ್ವಿನಿ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.

ಶಬ ಧಾತು ಚಲನೆ ಎಂಬರ್ಥವಿದ್ದು, ಅರಃ ಪ್ರತ್ಯಯ ಸೇರಿ ಶಬರ ಪದದ ನಿಷ್ಪತ್ತಿಯಾಗಿ, ಕಿರಾತ, ಬೇಡರವನು, ಶಂಕರ ಎಂಬರ್ಥಗಳು ಸ್ಫುರಿಸುತ್ತವೆ. ಸ್ತ್ರೀಲಿಂಗದಲ್ಲಿ

ರೀ  ಪ್ರತ್ಯಯ ಸೇರಿ ಶಬರೀ ಎಂದಾಗಿದೆ. ಕನ್ನಡದಲ್ಲಿ ಶಬರಿ ಎಂದಾಗಿದೆ.

ಶ್ರಮು ಧಾತು ತಪಸ್ಸು, ದುಃಖ ಎಂಬರ್ಥವಿದ್ದು ಣಃ ಪ್ರತ್ಯಯ ಸೇರಿ ಶ್ರಮಣ ಪದ ಸಿದ್ಧಿಸಿ, ಬೌದ್ಧಭಿಕ್ಷು, ತಪಸ್ವಿ, ಯೋಗಿ ಮುಂತಾದ ಅರ್ಥಗಳಿವೆ. ಶ್ರಮಣ ಪದಕ್ಕೆ ಸ್ತ್ರೀ ಪ್ರತ್ಯಯ 'ಆ' ಸೇರಿ ಶ್ರಮಣಾ ಎಂದಾಗಿ ತಪಸ್ವಿನಿ, ಪರಿವ್ರಾಜಿಕೆ ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ಕನ್ನಡದಲ್ಲಿ ಶ್ರಮಣಿ ಎಂದಾಗಿದೆ.

ಅ.ನಾ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ