ಹೊಂಗಿರಣ ಬ್ಲಾಗ್ ಗೆ ತಮಗೆ ಆದರದ ಸುಸ್ವಾಗತ… ನಿಮ್ಮ ಸಲಹೆ ಮಾರ್ಗದರ್ಶನಕ್ಕೆ ಸದಾ ಸ್ವಾಗತ….. ಭೇಟಿ ನೀಡಿದ್ದಕ್ಕೆಧನ್ಯವಾದಗಳು…

ಸೆಪ್ಟೆಂಬರ್ 24, 2020

ದಿನದಿನವು ಹಬ್ಬ ಕೇಳ್

ಸಾಲಶೂಲದಿ ಸಿಲುಕಿ

ಭಕ್ಷ್ಯಭೋಜ್ಯವನುಂಡು

ಹಬ್ಬಗೈಯ್ಯುವ ಪರಿಯ

ಹುಚ್ಚುತನವೇಕೆ ?ಅಂದೆ ದುಡಿದಂದೆ ಉಂ

ಡಾಡುಲಿವ ಖಗಮಿಗಕೆ

ದಿನದಿನವು ಹಬ್ಬ ಕೇಳ್

ಜಾಣಮೂರ್ಖ//

    ಹಬ್ಬ ಎಂದರೇನು ? ಸ್ವಲ್ಪ ಯೋಚಿಸಿ. ಸಂತಸದ ಬದುಕೇ ಹಬ್ಬ. ಆದರೆ ಸಾಲ ಮಾಡಿಯಾದರೂ ದಿನಸಿ ತಂದು, ನೆಂಟರಿಷ್ಟರೊಡಗೂಡಿ , ಭಕ್ಷ್ಯಭೋಜ್ಯಾದಿಗಳನುಂಡು ಮತ್ತೆ ಆ ಸಾಲ ತೀರಿಸಲು ತಲೆಯ ಮೇಲೆ ಕೈ ಹೊತ್ತು ಕೂರುವ ಇಂತಹಾ ಬಗೆಯೇಕೆ ? ಇದು ನಾವಾಗಿಯೇ ಚಿಂತೆಯನ್ನು ಹುಟ್ಟು ಹಾಕಿಕೊಂಡ ಹುಚ್ಚುತನ ತಾನೆ ? ಇದು ನನ್ನನ್ನೂ ಒಳಗೊಂಡಂತೆ ಸ್ವವಿಮರ್ಶೆ ಮಾಡಿಕೊಂಡೇ ಹೇಳುತ್ತಿದ್ದೇನೆ ಗೆಳೆಯರೇ ! ಇದೊಂದು ತರಹ ಇರುಳು ಕಂಡ ಕೂಪಕ್ಕೆ ಹಗಲು ಬಿದ್ದಂತೆ ಅಲ್ಲವೇ !? ಅದೇ ಖಗ ಮೃಗಾದಿಗಳನ್ನು ನೋಡಿ ಅಂದೇ ದುಡಿದು , ಅಂದೇ ಉಂಡು , ಸಂತಸದಿಂದ ಉಲಿದು ಆಡಿ , ಹಾಡಿ ಬದುಕುವ ಅವುಗಳಿಗೆ ದಿನದಿನವೂ ಹಬ್ಬವೇ ! ಅವುಗಳ ಬದುಕನ್ನು ನೋಡಿ ನಾವು ಕಲಿಯೋದು ಬಹಳಷ್ಟಿದೆ. ಏನಂತೀರಿ ?

(ಉಂಡಾಡುಲಿವ =ಉಂಡು+ಆಡಿ+ಉಲಿವ) 

✍️ಮುರಳೀಧರ ಹೆಚ್.ಆರ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ