ಇರುಳ ಕತ್ತಲೆ ಕಳೆಯೆಸ
ಸಣ್ಣ ದೀಪದ ಬೆಳಕು
ಬಾಳ್ಗತ್ತಲೆಯ ಕಳೆಯೆ
ಅರಿವಿನಾ ಬೆಳಕು
ದಾರಿಗಾಣದೆ ಎಡವಿ
ಬೀಳದಲೆ ಕರೆದೊಯ್ವು
ದಧ್ಯಾತ್ಮ ದೀಪ ಕಾಣ್
ಜಾಣಮೂರ್ಖ//
ರಾತ್ರಿಯ ಭೌತಿಕವಾದ ಕತ್ತಲನ್ನು ಕಳೆಯಲು ಸಣ್ಣದೊಂದು ದೀಪದ ಬೆಳಕು ಸಾಕು. ಆದರೆ ಬದುಕಿನ ಅಂಧಕಾರವನ್ನು ಕಳೆಯಲು ಅರಿವಿನ ಬೆಳಕು ಬೆಳಗಬೇಕು ಕಣಯ್ಯ ಗೆಳೆಯ. ಅದು ಬೆಳಗದೇ ಹೋದರೆ ಬಾಳ ಕತ್ತಲೆಯನ್ನು ಎಂತು ಕಳೆಯಲಾದೀತು ? ಜಗದ ಬದುಕಿಗಡರಿದ ಕಾರ್ಗತ್ತಲನ್ನು ಸೀಳಿ ಮುನ್ನಡೆಸೋ ಬೆಳಕೆಂದರೆ ಅಧ್ಯಾತ್ಮದ ಅರಿವು ! ಅಧ್ಯಾತ್ಮದ ದೀಪ, ಅಧ್ಯಾತ್ಮ ಜ್ಯೋತಿ ! ಆ ಜ್ಯೋತಿ ಬೆಳಗಿದರೆ ಎಡಹುವ , ದಾರಿ ತಪ್ಪುವ ಮಾತೆಲ್ಲಿಯದು ? ಅಲ್ಲವೇ ಗೆಳೆಯರೇ ?
✍️ಮುರಳೀಧರ ಹೆಚ್.ಆರ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ