ಹೊಂಗಿರಣ ಬ್ಲಾಗ್ ಗೆ ತಮಗೆ ಆದರದ ಸುಸ್ವಾಗತ… ನಿಮ್ಮ ಸಲಹೆ ಮಾರ್ಗದರ್ಶನಕ್ಕೆ ಸದಾ ಸ್ವಾಗತ….. ಭೇಟಿ ನೀಡಿದ್ದಕ್ಕೆಧನ್ಯವಾದಗಳು…

ಆಗಸ್ಟ್ 18, 2021

ಚಿತ್ರ: ಶುಭ ಮಂಗಳ - ಸೂರ್ಯಂಗು,ಚಂದ್ರಂಗು,ಬಂದಾರೆ ಮುನಿಸು,ನಗುತಾದ ಬುತಾಯಿ ಮನಸು.

 ಚಿತ್ರ: ಶುಭ ಮಂಗಳ 

ಸಂಗೀತ: ವಿಜಯ ಭಾಸ್ಕರ್
ಸಾಹಿತ್ಯ:ಎಂ.ಏನ್.ವ್ಯಾಸ ರಾವ್ 
ನಿರ್ದೇಶನ:ಪುಟ್ಟಣ್ಣ ಕಣಗಾಲ್ 
ಗಾಯಕರು: ರವಿ 

ಸೂರ್ಯಂಗು,ಚಂದ್ರಂಗು,ಬಂದಾರೆ ಮುನಿಸು,ನಗುತಾದ ಬುತಾಯಿ ಮನಸು.
ಸೂರ್ಯಂಗು,ಚಂದ್ರಂಗು,ಬಂದಾರೆ ಮುನಿಸು,ನಗುತಾದ ಬುತಾಯಿ ಮನಸು.
ರಾಜಂಗು,ರಾಣಿಗೂ,ಮುರಿದೋದ್ರೆ ಮನಸು,ಅರಮನೆಯಾಗೆನೈತೆ ಸೊಗಸು.
ಅರಮನೆಯಾಗೆನೈತೆ ಸೊಗಸು.

ಮನೆ ತುಂಬಾ ಹರಿದೈತೆ ಕೆನೆ ಹಾಲು ಮೊಸರು 
ಎದೆಯಾಗೆ ಬೆರೆತೈತೆ ಬ್ಯಾಸರದಾ ಉಸಿರು 
ಗುಡಿಯಾಗೆ ಬೆಳಗೈತೆ ತುಪ್ಪಾದ ದೀಪ 
ನುಡಿಯಗೆ ನಡೆಯಾಗೆ,ಸಿಡಿದೈತೆ ಕೋಪ, ಸಿಡಿದೈತೆ ಕೋಪ

ಸೂರ್ಯಂಗು,ಚಂದ್ರಂಗು,ಬಂದಾರೆ ಮುನಿಸು,ನಗುತಾದ ಬುತಾಯಿ ಮನಸು.
ರಾಜಂಗು,ರಾಣಿಗೂ,ಮುರಿದೋದ್ರೆ ಮನಸು,ಅರಮನೆಯಾಗೆನೈತೆ ಸೊಗಸು.
ಅರಮನೆಯಾಗೆನೈತೆ ಸೊಗಸು.

ಬೆಳದಿಂಗಳು ಚಲೈತೆ ಅಂಗಳದಾ ಹೊರಗೆ 
ಕರಿ ಮೋಡ ಮುಸುಕೈತೆ ಮನಸಿನಾ ಒಳಗೆ 
ಬಯಲಾಗೆ ತುಳುಕೈತೆ ಹರುಷದ ಹೊನಲು 
ಪ್ರೀತಿಯ ತೆರಿಗೆ ಬಡಿದೈತೆ ಸಿಡಿಲು ,ಬಡಿದೈತೆ ಸಿಡಿಲು.

ಸೂರ್ಯಂಗು,ಚಂದ್ರಂಗು,ಬಂದಾರೆ ಮುನಿಸು,ನಗುತಾದ ಬುತಾಯಿ ಮನಸು.
ರಾಜಂಗು,ರಾಣಿಗೂ,ಮುರಿದೋದ್ರೆ ಮನಸು,ಅರಮನೆಯಾಗೆನೈತೆ ಸೊಗಸು.
ಅರಮನೆಯಾಗೆನೈತೆ ಸೊಗಸು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ