ಚಿತ್ರ: ಬಹದ್ದೂರ್ ಗಂಡು
ಸಂಗೀತ: ಎಂ ರಂಗಾರಾವ್
ಸಾಹಿತ್ಯ: ಚಿ.ಉದಯ ಶಂಕರ್
ನಿರ್ದೇಶನ: ವಿಜಯ್
ಗಾಯಕರು: ಡಾ. ರಾಜಕುಮಾರ್ಮಾನವನಾಗುವೆಯಾ ಇಲ್ಲಾ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಮಾನವನಾಗುವೆಯಾ ಇಲ್ಲಾ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಹೇಳು ನೀ ಹೇಳು ಹೇಳು ನೀ ಹೇಳು
ಎಲ್ಲಾ ಗುಣಗಳು ನಿನ್ನಲೇ ಅಡಗಿ ಕಾಳಗ ಮಾಡುತಿವೆ........
ಎಲ್ಲಾ ಗುಣಗಳು ನಿನ್ನಲೇ ಅಡಗಿ ಕಾಳಗ ಮಾಡುತಿವೆ
ಮನ ತುಂಬಿರುವ ಶಾಂತಿಯ ನುಂಗಿ ಕೊನೆಯನು ನೋಡುತಿವೆ
ರೋಷವಾ ಬಿಡುವೆಯಾ,ದ್ವೇಷವಾ ಮರೆವೆಯಾ,
ರೋಷವಾ ಬಿಡುವೆಯಾ,ದ್ವೇಷವಾ ಮರೆವೆಯಾ,
ರಕ್ಕಸನಾ ವಿಷ ಗಾಳಿಯ ನುಂಗದೆ,ಬದುಕಿ ಎಲ್ಲರಾ ಉಳಿಸುವೆಯಾ,
ಬದುಕಿ ಎಲ್ಲರಾ ಉಳಿಸುವೆಯಾ ................
ಮಾನವನಾಗುವೆಯಾ ಇಲ್ಲಾ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಹೇಳು ನೀ ಹೇಳು ಹೇಳು ನೀ ಹೇಳು
ಧನ ಕನಕಗಳಾ ಕೇಳುವುದಿಲ್ಲಾ ಸ್ನೇಹದ ಹವ್ಯಾಸಾ,
ಧನ ಕನಕಗಳಾ ಕೇಳುವುದಿಲ್ಲಾ ಸ್ನೇಹದ ಹವ್ಯಾಸಾ,
ನಿನ್ನಭಿಮಾನವಾ ಕೆಣಕುವುದಿಲ್ಲ,ಪ್ರೇಮದ ಸಂತೋಷ
ಅಂದದಾ ತುಟಿಯಲಿ ಹುಸಿನಗೆ ತೇಲಲಿ,
ಅಂದದಾ ತುಟಿಯಲಿ ಹುಸಿನಗೆ ತೇಲಲಿ
ಅಕ್ಕರೆ ನುಡಿಯ,ಸಕ್ಕರೆ ರುಚಿಯಾ,
ನೀಡಿ ಎಲ್ಲರಾ ಗೆಲ್ಲುವೆಯಾ,ನೀನು ಎಲ್ಲರಾ ಗೆಲ್ಲುವೆಯಾ,
ಮಾನವನಾಗುವೆಯಾ ಇಲ್ಲಾ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಹೇಳು ನೀ ಹೇಳು ಹೇಳು ನೀ ಹೇಳು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ