ಹೊಂಗಿರಣ ಬ್ಲಾಗ್ ಗೆ ತಮಗೆ ಆದರದ ಸುಸ್ವಾಗತ… ನಿಮ್ಮ ಸಲಹೆ ಮಾರ್ಗದರ್ಶನಕ್ಕೆ ಸದಾ ಸ್ವಾಗತ….. ಭೇಟಿ ನೀಡಿದ್ದಕ್ಕೆಧನ್ಯವಾದಗಳು…

ಆಗಸ್ಟ್ 18, 2021

ಚಿತ್ರ:ಭಾಗ್ಯವಂತರು - ನಿನ್ನ ನನ್ನ ಮನವು ಸೇರಿತು,ನನ್ನ ನಿನ್ನ ಹೃದಯಾ ಹಾಡಿತು,

 ಚಿತ್ರ:ಭಾಗ್ಯವಂತರು

ಸಂಗೀತ:ರಾಜನ್ ನಾಗೇಂದ್ರ 
ಸಾಹಿತ್ಯ:ಚಿ.ಉದಯ್ ಶಂಕರ್ 
ನಿರ್ದೇಶನ:ಭಾರ್ಗವ 
ಗಾಯಕರು:ಪಿ.ಬಿ.ಶ್ರೀನಿವಾಸ್ 

ನಿನ್ನ ನನ್ನ ಮನವು ಸೇರಿತು,ನನ್ನ ನಿನ್ನ ಹೃದಯಾ ಹಾಡಿತು,
ನಿನ್ನ ನನ್ನ ಮನವು ಸೇರಿತು,ನನ್ನ ನಿನ್ನ ಹೃದಯಾ ಹಾಡಿತು,
ರಾಗವು ಒಂದೇ ಭಾವವು ಒಂದೇ,ಜೀವ ಒಂದಾಯಿತು,ಬಾಳು ಹಗುರಾಯಿತು. 
ನಿನ್ನ ನನ್ನ ಮನವು ಸೇರಿತು,ನನ್ನ ನಿನ್ನ ಹೃದಯಾ ಹಾಡಿತು,

ಏಕಾಂಗಿಯಾಗಿರಲು ಕೈ ಹಿಡಿದೇ,ಜೊತೆಯಾದೆ 
ತಾಯಂತೆ ಬಳಿ ಬಂದೆ,ಆದರಿಸಿ ಪ್ರೀತಿಸಿದೆ
ಬಾಳಲಿ ಸುಖ ನೀಡಿದೆ,ನನ್ನೀ ಬದುಕಿಗೆ ಶ್ರುತಿಯಾದೆ ,
ನನ್ನೀ ಮನೆಯಾ ಬೆಳಕಾದೆ.

ನಿನ್ನ ನನ್ನ ಮನವು ಸೇರಿತು,ನನ್ನ ನಿನ್ನ ಹೃದಯಾ ಹಾಡಿತು,

ಎಂದೂ ಜೊತೆಯಲಿ ಬರುವೆ,ನಿನ್ನ ನೆರಳಿನ ಹಾಗೆ ಇರುವೆ,
ಕೊರಗದಿರು,ಮರುಗದಿರು,ಹಾಯಾಗಿ ನೀನಿರು.
ಎಂದೂ ಜೊತೆಯಲಿ ಬರುವೆ,ನಿನ್ನ ಉಸಿರಲಿ ಉಸಿರಾಗಿರುವೆ,
ನೋವುಗಳು ನನಗಿರಲಿ,ಆನಂದ ನಿನದಾಗಲಿ.
ನಗುವಿನ ಹೂಗಳ ಮೇಲೆ,ನಡೆಯುವ ಬಾಗ್ಯ ನಿನಗಿರಲಿ,
ನೋಡುವ ಬಾಗ್ಯ ನನಗಿರಲಿ .

ನಿನ್ನ ನನ್ನ ಮನವು ಸೇರಿತು,ನನ್ನ ನಿನ್ನ ಹೃದಯಾ ಹಾಡಿತು,
ರಾಗವು ಒಂದೇ ಭಾವವು ಒಂದೇ,ಜೀವ ಒಂದಾಯಿತು,ಬಾಳು ಹಗುರಾಯಿತು. 
ನಿನ್ನ ನನ್ನ ಮನವು ಸೇರಿತು,ನನ್ನ ನಿನ್ನ ಹೃದಯಾ ಹಾಡಿತು,
 
ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ