ಹೊಂಗಿರಣ ಬ್ಲಾಗ್ ಗೆ ತಮಗೆ ಆದರದ ಸುಸ್ವಾಗತ… ನಿಮ್ಮ ಸಲಹೆ ಮಾರ್ಗದರ್ಶನಕ್ಕೆ ಸದಾ ಸ್ವಾಗತ….. ಭೇಟಿ ನೀಡಿದ್ದಕ್ಕೆಧನ್ಯವಾದಗಳು…

ಆಗಸ್ಟ್ 18, 2021

ಚಿತ್ರ: ನೀ ನನ್ನ ಗೆಲ್ಲಲಾರೆ - ಐ ಲವ್ ಯು, ಐ ಲವ್ ಯು, ಐ ಲವ್ ಯು, ಐ ಲವ್ ಯು

 ಚಿತ್ರ: ನೀ ನನ್ನ ಗೆಲ್ಲಲಾರೆ 

ಸಂಗೀತ: ಇಳಯರಾಜ 
ಸಾಹಿತ್ಯ:ಚಿ.ಉದಯ್ ಶಂಕರ್ 
ನಿರ್ದೇಶನ: ವಿಜಯ್ 
ಗಾಯಕರು: ಡಾ ರಾಜಕುಮಾರ್ 

ಐ ಲವ್ ಯು, ಐ ಲವ್ ಯು, ಐ ಲವ್ ಯು, ಐ ಲವ್ ಯು,

ಅನುರಾಗ ಏನಾಯ್ತು,ಮನಸೇಕೆ ಕಲ್ಲಾಯ್ತು,
ನಿನ್ನಾ ಸವಿಮಾತು ಕಹಿ ಏಕಾಯ್ತು,ನಿನ್ನೋಲವೆಲ್ಲಾ ಇಂದೇನಾಯ್ತು,
ಅನುರಾಗ ಏನಾಯ್ತು....

ನೀಲಿ ಬಾನನು ಬಿಡುವಾಗ ಮುಗಿಲೆಲ್ಲಾ ಕರಗಿ ಅಳುವಂತೆ, 
ನೀಲಿ ಬಾನನು ಬಿಡುವಾಗ ಮುಗಿಲೆಲ್ಲಾ ಕರಗಿ ಅಳುವಂತೆ, 
ನಿನ್ನಾ ಪ್ರೇಮದಿಂದಾ ನಾ ದೂರಾಗಿ,ನನ್ನಾ ಕಂಗಳೆಲ್ಲಾ ಕಣ್ಣೀರಾಗಿ,
ಹಗಲಿರುಳೆಲ್ಲಾ ನಿನ್ನಾ ನೆನಪಾಯ್ತು,ಸರಸಾ ಹರುಷಾ ಬರಿ ಕನಸಾಯ್ತು.

ಅನುರಾಗ ಏನಾಯ್ತು..
ಓಡಿ ಬರುವಾ ನದಿಯಲ್ಲಿ,ಕಡಲಾಸೆ ತುಂಬಿ ಹರಿವಂತೆ, 
ಓಡಿ ಬರುವಾ ನದಿಯಲ್ಲಿ,ಕಡಲಾಸೆ ತುಂಬಿ ಹರಿವಂತೆ, 
ನಿನ್ನಾ ಸೇರೋ ಆಸೆ ನಾ ಕಂಡಾಗ,ಜೊತೆ ಬಾಳಲೆಂದು ಬಳಿ ಬಂದಾಗ 
ಸಿಡಿಲೊಂದೆರೆಗಿ ಬಡಿದಂತಾಗಿ,ವಿರಸ,ವಿರಹ ಕಹಿ ನನಗಾಯ್ತು 

ಅನುರಾಗ ಏನಾಯ್ತು,ಮನಸೇಕೆ ಕಲ್ಲಾಯ್ತು,
ನಿನ್ನಾ ಸವಿಮಾತು ಕಹಿ ಏಕಾಯ್ತು,ನಿನ್ನೋಲವೆಲ್ಲಾ ಇಂದೇನಾಯ್ತು,
ಅನುರಾಗ ಏನಾಯ್ತು....ಮನಸೇಕೆ ಕಲ್ಲಾಯ್ತು,

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ