ಹೊಂಗಿರಣ ಬ್ಲಾಗ್ ಗೆ ತಮಗೆ ಆದರದ ಸುಸ್ವಾಗತ… ನಿಮ್ಮ ಸಲಹೆ ಮಾರ್ಗದರ್ಶನಕ್ಕೆ ಸದಾ ಸ್ವಾಗತ….. ಭೇಟಿ ನೀಡಿದ್ದಕ್ಕೆಧನ್ಯವಾದಗಳು…

ಸೆಪ್ಟೆಂಬರ್ 24, 2020

ಪದ ಚಿಂತನ

ಶಬರಿ/ ಶ್ರಮಣಿ

ಬೇಡರ ಸ್ತ್ರೀ( ರಾಮನ ದರ್ಶನ ನಿರೀಕ್ಷೆಯಲ್ಲಿದ್ದವಳು) ತಪಸ್ವಿನಿ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.

ಶಬ ಧಾತು ಚಲನೆ ಎಂಬರ್ಥವಿದ್ದು, ಅರಃ ಪ್ರತ್ಯಯ ಸೇರಿ ಶಬರ ಪದದ ನಿಷ್ಪತ್ತಿಯಾಗಿ, ಕಿರಾತ, ಬೇಡರವನು, ಶಂಕರ ಎಂಬರ್ಥಗಳು ಸ್ಫುರಿಸುತ್ತವೆ. ಸ್ತ್ರೀಲಿಂಗದಲ್ಲಿ

ರೀ  ಪ್ರತ್ಯಯ ಸೇರಿ ಶಬರೀ ಎಂದಾಗಿದೆ. ಕನ್ನಡದಲ್ಲಿ ಶಬರಿ ಎಂದಾಗಿದೆ.

ಶ್ರಮು ಧಾತು ತಪಸ್ಸು, ದುಃಖ ಎಂಬರ್ಥವಿದ್ದು ಣಃ ಪ್ರತ್ಯಯ ಸೇರಿ ಶ್ರಮಣ ಪದ ಸಿದ್ಧಿಸಿ, ಬೌದ್ಧಭಿಕ್ಷು, ತಪಸ್ವಿ, ಯೋಗಿ ಮುಂತಾದ ಅರ್ಥಗಳಿವೆ. ಶ್ರಮಣ ಪದಕ್ಕೆ ಸ್ತ್ರೀ ಪ್ರತ್ಯಯ 'ಆ' ಸೇರಿ ಶ್ರಮಣಾ ಎಂದಾಗಿ ತಪಸ್ವಿನಿ, ಪರಿವ್ರಾಜಿಕೆ ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ಕನ್ನಡದಲ್ಲಿ ಶ್ರಮಣಿ ಎಂದಾಗಿದೆ.

ಅ.ನಾ.

ದಿನದಿನವು ಹಬ್ಬ ಕೇಳ್

ಸಾಲಶೂಲದಿ ಸಿಲುಕಿ

ಭಕ್ಷ್ಯಭೋಜ್ಯವನುಂಡು

ಹಬ್ಬಗೈಯ್ಯುವ ಪರಿಯ

ಹುಚ್ಚುತನವೇಕೆ ?ಅಂದೆ ದುಡಿದಂದೆ ಉಂ

ಡಾಡುಲಿವ ಖಗಮಿಗಕೆ

ದಿನದಿನವು ಹಬ್ಬ ಕೇಳ್

ಜಾಣಮೂರ್ಖ//

    ಹಬ್ಬ ಎಂದರೇನು ? ಸ್ವಲ್ಪ ಯೋಚಿಸಿ. ಸಂತಸದ ಬದುಕೇ ಹಬ್ಬ. ಆದರೆ ಸಾಲ ಮಾಡಿಯಾದರೂ ದಿನಸಿ ತಂದು, ನೆಂಟರಿಷ್ಟರೊಡಗೂಡಿ , ಭಕ್ಷ್ಯಭೋಜ್ಯಾದಿಗಳನುಂಡು ಮತ್ತೆ ಆ ಸಾಲ ತೀರಿಸಲು ತಲೆಯ ಮೇಲೆ ಕೈ ಹೊತ್ತು ಕೂರುವ ಇಂತಹಾ ಬಗೆಯೇಕೆ ? ಇದು ನಾವಾಗಿಯೇ ಚಿಂತೆಯನ್ನು ಹುಟ್ಟು ಹಾಕಿಕೊಂಡ ಹುಚ್ಚುತನ ತಾನೆ ? ಇದು ನನ್ನನ್ನೂ ಒಳಗೊಂಡಂತೆ ಸ್ವವಿಮರ್ಶೆ ಮಾಡಿಕೊಂಡೇ ಹೇಳುತ್ತಿದ್ದೇನೆ ಗೆಳೆಯರೇ ! ಇದೊಂದು ತರಹ ಇರುಳು ಕಂಡ ಕೂಪಕ್ಕೆ ಹಗಲು ಬಿದ್ದಂತೆ ಅಲ್ಲವೇ !? ಅದೇ ಖಗ ಮೃಗಾದಿಗಳನ್ನು ನೋಡಿ ಅಂದೇ ದುಡಿದು , ಅಂದೇ ಉಂಡು , ಸಂತಸದಿಂದ ಉಲಿದು ಆಡಿ , ಹಾಡಿ ಬದುಕುವ ಅವುಗಳಿಗೆ ದಿನದಿನವೂ ಹಬ್ಬವೇ ! ಅವುಗಳ ಬದುಕನ್ನು ನೋಡಿ ನಾವು ಕಲಿಯೋದು ಬಹಳಷ್ಟಿದೆ. ಏನಂತೀರಿ ?

(ಉಂಡಾಡುಲಿವ =ಉಂಡು+ಆಡಿ+ಉಲಿವ) 

✍️ಮುರಳೀಧರ ಹೆಚ್.ಆರ್.

ಸೆಪ್ಟೆಂಬರ್ 23, 2020

ವಿದ್ಯಾಗಮ

 1. ವಿದ್ಯಾಗಮ ಸುತ್ತೋಲೆ. ಇಲ್ಲಿ ಕ್ಲಿಕ್ ಮಾಡಿ

2. 4 ರಿಂದ 10ನೇ ತರಗತಿವರೆಗೆ ಮಾರ್ಗದರ್ಶಿ ಸೂಚನೆಗಳು ಇಲ್ಲಿ ಕ್ಲಿಕ್ ಮಾಡಿ

3. 10ನೆಯ ತರಗತಿ  ಪರ್ಯಾಯ ಕ್ಯಾಲೆಂಡರ್. ಇಲ್ಲಿ ಕ್ಲಿಕ್ ಮಾಡಿ 

4. 09ನೆಯ ತರಗತಿ  ಪರ್ಯಾಯ ಕ್ಯಾಲೆಂಡರ್. ಇಲ್ಲಿ ಕ್ಲಿಕ್ ಮಾಡಿ

5. 08ನೆಯ ತರಗತಿ  ಪರ್ಯಾಯ ಕ್ಯಾಲೆಂಡರ್. ಇಲ್ಲಿ ಕ್ಲಿಕ್ ಮಾಡಿ

1. ಕಡಿತಗೊಂಡ ಪಠ್ಯದ ವಿವರ ಇಲ್ಲಿ ಕ್ಲಿಕ್ ಮಾಡಿ 

2. ವಿದ್ಯಾ‍ರ್ಥಿಗಳ ಶೈಕ್ಷಣಿಕ ದಾಖಲೆಗಳ ತಿದ್ದುಪಡಿಗಾಗಿ ಇರುವ ಆದೇಶ ಇಲ್ಲಿ ಕ್ಲಿಕ್ ಮಾಡಿ 

ಅಧ್ಯಾತ್ಮ ದೀಪ

ಇರುಳ ಕತ್ತಲೆ ಕಳೆಯೆಸ

ಸಣ್ಣ ದೀಪದ ಬೆಳಕು

ಬಾಳ್ಗತ್ತಲೆಯ ಕಳೆಯೆ

ಅರಿವಿನಾ ಬೆಳಕು

ದಾರಿಗಾಣದೆ ಎಡವಿ

ಬೀಳದಲೆ ಕರೆದೊಯ್ವು

ದಧ್ಯಾತ್ಮ ದೀಪ ಕಾಣ್

ಜಾಣಮೂರ್ಖ//

ರಾತ್ರಿಯ ಭೌತಿಕವಾದ ಕತ್ತಲನ್ನು ಕಳೆಯಲು ಸಣ್ಣದೊಂದು ದೀಪದ ಬೆಳಕು ಸಾಕು. ಆದರೆ ಬದುಕಿನ ಅಂಧಕಾರವನ್ನು ಕಳೆಯಲು ಅರಿವಿನ ಬೆಳಕು ಬೆಳಗಬೇಕು ಕಣಯ್ಯ ಗೆಳೆಯ. ಅದು ಬೆಳಗದೇ ಹೋದರೆ ಬಾಳ ಕತ್ತಲೆಯನ್ನು ಎಂತು ಕಳೆಯಲಾದೀತು ? ಜಗದ ಬದುಕಿಗಡರಿದ ಕಾರ್ಗತ್ತಲನ್ನು  ಸೀಳಿ ಮುನ್ನಡೆಸೋ ಬೆಳಕೆಂದರೆ ಅಧ್ಯಾತ್ಮದ ಅರಿವು ! ಅಧ್ಯಾತ್ಮದ ದೀಪ, ಅಧ್ಯಾತ್ಮ ಜ್ಯೋತಿ ! ಆ ಜ್ಯೋತಿ ಬೆಳಗಿದರೆ ಎಡಹುವ , ದಾರಿ ತಪ್ಪುವ  ಮಾತೆಲ್ಲಿಯದು ? ಅಲ್ಲವೇ ಗೆಳೆಯರೇ ?

✍️ಮುರಳೀಧರ ಹೆಚ್.ಆರ್.

ತಿಳಿದಿಲ್ಲ ಅವರಿಗೆ-

ಅವರು ತಮ್ಮನ್ನು ತಾವು

ಕನ್ನಡಿಯಲ್ಲಿ ಕಾಣುವುದಕ್ಕಿಂತ ಹೆಚ್ಚು

ನನ್ನ ಕವಿತೆಗಳಲ್ಲಿ ಕಾಣಬಹುದೆಂದು


ಮೂಲ: ಮಿರ್ಜಾ ಗಾಲಿಬ್

ಅನುವಾದ: ಬಿ.ಎಸ್.ವಿನಯ್

ಸೆಪ್ಟೆಂಬರ್ 22, 2020

ಕೊಟ್ಟು ಮರೆಯುತ ಸರಿಯೊ

 

ದೇವಂಗೆ ಹೂವಿತ್ತು

ಮೌನತಳೆವುದು ಬಳ್ಳಿ !

ಕುಕಿಲ ಸಂತಸಮಿತ್ತು

ಹೋಹುದೈ ಹಾರಿ !

ಅಹಮಿಕೆಯ ತೊರೆದು ತಾ

ಸಾಜದೊಳು ಬಾಳ್ವಂತೆ

ಕೊಟ್ಟು ಮರೆಯುತ ಸರಿಯೊ

ಜಾಣಮೂರ್ಖ//

ಭಕ್ತಿ ಭಂಡಾರಿ ಬಸವಣ್ಣನವರು ತಮ್ಮ ಒಂದು ವಚನದಲ್ಲಿ -"ಮಾಡುವ ಮಾಟದೊಳು ತಾನಿಲ್ಲದಂತಿರಬೇಕು ; ಶಿವನ ನೆನೆಯುತ್ತ ನೆನೆಯುತ್ತ ನೆನೆಯದಂತಿರಬೇಕು" ಎಂದಿದ್ದಾರೆ. ಹಾಗೆಯೇ ಭಗವಂತನ ಅರ್ಚನೆಗೆ ಹೂವನಿತ್ತು ಬಳ್ಳಿ ಮೌನಿಯಾಗುತ್ತದೆ ! ಕೋಗಿಲೆಯು ಮಧುರವಾದ ಕೂಗಿತ್ತು ಪ್ರಪಂಚವನ್ನು ಗಂಧರ್ವ ಲೋಕವನ್ನಾಗಿಸಿ ತಾನೆತ್ತಲೋ ಮೌನವಾಗಿ ಹಾರಿ ಹೋಗುತ್ತದೆ. ಓ ಗೆಳೆಯ ನಾವೂ ಸಹ ಹಾಗೆಯೇ ಇರಬೇಕು. ಸತ್ಕರ್ಮಗಳನ್ನೆಸಗಿ ಮೌನದಿಂದ , ಸಹಜವಾಗಿ ಬದುಕಬೇಕು. ನಾನೆಂಬ ಅಹಂಕಾರವು  ಸುಳಿಯದಂತೆ ಎಚ್ಚರವಹಿಸಬೇಕು. ಎಂತಹಾ ಸುಂದರ ಬದುಕದು ? ಅಲ್ಲವೇ ಗೆಳೆಯರೇ ?

✍️ಮುರಳೀಧರ ಹೆಚ್.ಆರ್.

ಪದಚಿಂತನ

ಸಂವೇದನಾಶೀಲ/ ನಿರೂಪಣೆ

ಅರಿವಿನ ನಡೆ, ವಿವರಿಸುವುದು ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.

ವಿದ್ ಧಾತು ಜ್ಞಾನ ಎಂಬರ್ಥ ಹೊಂದಿದ್ದು, ಅ+ ನಾ ಪ್ರತ್ಯಯ ಮತ್ತು ಸಂ ಉಪಸರ್ಗ ಸೇರಿ ಸಂವೇದನಾ ಪದವು ನಿಷ್ಪತ್ತಿಯಾಗಿ,

ಅರಿವು, ಅನುಭವ ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ಶೀಲ್ ಧಾತು ಗುಣ ಎಂಬರ್ಥವಿದ್ದು ಅ ಪ್ರತ್ಯಯ ಸೇರಿ ಶೀಲ ಎಂದಾಗಿ,

ಸ್ವಭಾವ, ಸತ್ತ್ವ, ನೀತಿ, ಒಳ್ಳೆಯ ನಡತೆ ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಸಂವೇದನಾಶೀಲ ಸಮಸ್ತ ಪದವು ಜ್ಞಾನದ ನಡೆ, ಅರಿವಿನ ಸ್ವಭಾವ ಮುಂತಾದ ಅರ್ಥಗಳನ್ನು ಹೊಂದಿದೆ.


ರೂಪ ಧಾತು ಆಕಾರ,ಸೌಂದರ್ಯ ಎಂಬ ಅರ್ಥ ಹೊಂದಿದ್ದು, ಣ ಪ್ರತ್ಯಯ ನಿ ಉಪಸರ್ಗ ಸೇರಿ ನಿರೂಪಣ ಪದ ಸಿದ್ಧಿಸಿ, ಗಮನಿಸುವುದು, ವಿಮರ್ಶಿಸುವುದು, ವಿಷಯಸ್ವರೂಪವನ್ನು ವಿವರಿಸುವುದು ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಕನ್ನಡದಲ್ಲಿ ನಿರೂಪಣೆ ಎಂದಾಗಿದೆ.

ಅ.ನಾ.